Home
Renovation of Town Municipal Council, Nanjangud on 31-12-2012 Inaugarated By Honorable Lok Sabha Member Sri .Dhruvanarayana

ನಂಜನಗೂಡು ಪಟ್ಟಣವು ತಾಲ್ಲೂಕು ಕೇಂದ್ರ ಸ್ಥಾನವಾಗಿದ್ದು. ಈ ಪಟ್ಟಣವು 1908ನೇ ಇಸವಿಯಲ್ಲಿ ಸ್ಥಾಪನೆಯಾಯಿತು. ಈ ಪಟ್ಟಣವು 27 ವಾರ್ಡುಗಳನ್ನೊಳಗೊಂಡಿದೆ . 2001 ರ ಜನಗಣತಿಯ ಪ್ರಕಾರ ಈ ಪಟ್ಟಣದ ಜನಸಂಖ್ಯೆ 48232. ನಂಜನಗೂಡುನಿಂದ ಮೈಸೂರಿಗೆ 24 ಕಿ.ಮೀ .ಅಂತರವಿರುತ್ತದೆ. ಈ ಪಟ್ಟಣಕ್ಕೆ ‘ಕಪಿಲಾ’ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ಈ ಪಟ್ಟಣವು "ದಕ್ಷಿಣ ಕಾಶಿ " ಎಂಬ ಹೆಸರಿನಿಂದ ಪ್ರಸಿದ್ಡಿ ಹೊಂದಿದೆ. ಇದು ವ್ಯವಸಾಯ ಮತ್ತು ಕೈಗಾರಿಕೋದ್ಯಮದ ಪಟ್ಟಣವಾಗಿದೆ. ಇಲ್ಲಿ ಬೆಳೆಯುವ ಪ್ರಮುಖವಾದ ಬೆಳೆಗಳೆಂದರೆ ಭತ್ತ , ಕಬ್ಬು , ರಸಬಾಳೆ ಹಣ್ಣು. ಇದರಲ್ಲಿ ಬಾಳೆಹಣ್ಣು “ ನಂಜನಗೂಡು ರಸಬಾಳೆ ಹಣ್ಣು “ ಎಂಬ ಹೆಸರಿನಿಂದ ಪ್ರಸಿದ್ಡಿ ಹೊಂದಿದೆ. ವೈದ್ಯಕೀಯ ಅನುಕೂಲತೆಗಾಗಿ ಒಂದು ಸಾರ್ವಜನಿಕ ಅಸ್ಪತ್ರೆ ಹಾಗೂ ಪಶುಗಳಿಗಾಗಿ ಒಂದು ಪಶು ವೈದ್ಯಕೀಯ ದವಾಖಾನೆಗಳು ಇರುತ್ತವೆ. ನಂಜನಗೂಡು ಪಟ್ಟಣದಲ್ಲಿ ಪ್ರತಿ ಶುಕ್ರವಾರ ದನಗಳ ಮತ್ತು ತರಕಾರಿಗಳ ಸಂತೆಯ ದಿನವಾಗಿರುತ್ತದೆ A Brief Note on Nanjanagud Town Nanjangud ULB (Town Municipal Council) was started in the year 1908.The ULB consists of 27 wards with the Respective Number of Councilors. The Total Population of the Town is 48232 as per Census 2001.and 50564 as per Census 2011. Nanjangud is a town in Mysore district in the Karnataka state of India . It is at a distance of 24 Km from the city of Mysore. And Bangalore to Nanjangud is around 163 Km.Nanjangud is also called as “Dakshina Kashi “. It is an Agricultural and Industrial based Town. It’s major Crops are PADDY, SUGARCANE, and BANANA. ಗಣಕೀಕರಣದ ಬಗ್ಗೆ. ಪುರಸಭೆಯು1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ.ಸಾರ್ವಜನಿಕ ಕುಂದುಕೊರತೆ ಮತ್ತು ನಿವಾರಣೆ ವಿಭಾಗವನ್ನು ತೆರೆದಿದ್ದು, ಸಾರ್ವಜನಿಕರಿಂದ ಬರುವ ದೂರುಗಳನ್ನು ಆನ್ ಲೈನ್ ಅಪ್ಲಿಕೇಷನ್ ನಲ್ಲಿ ದಾಖಲು ಮಾಡಲಾಗುತ್ತಿದೆ. COMPUTARIZATION We are very happy to intimate to the citizens of Nanjangud Town that we have computerized the Birth and Death records from 1990 to till date under state Government KMRP computerization scheme. From now on wards citizens are requested to visit the citizen service centre at the office for registration and getting Birth and Death certificates by paying service fee. Citizens are requested to make use of this facility. Public Grievances and Redressal Cell is open 24/7 and Complaints which are received from publics are registered Online. ಘನತ್ಯಾಜ್ಯ ವಸ್ತು ಸಂಗ್ರಹಣೆ ಪುರಸಭೆಯ -ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ ಸಂಗ್ರಹಣೆ, ಬೀದಿಗುಡಿಸುವುದು, ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ. ಪಟ್ಟಣದ 8 ವಾರ್ಡುಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪಟ್ಟಣ ಪಂಚಾಯಿತಿಯ ಸಹಾಯವಾಣಿ ಸಂಖ್ಯೆ: 08221-226101 ಸಂಪರ್ಕಿಸುವುದು. ಸಾರ್ವಜನಿಕರು ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕರಿಸಿ Solid Waste Management Solid Waste Management is done by Town Municipal Council. It is of two package system comprising primary collection, street sweeping and transportation to landfill site. Door-to-Door collections are done in 27 Wards. Citizens have to pay user charges as per the MSW-rules for door-to-door collections. If you have any complaints concerning to solid waste management please call our helpline no: 08221-226101. Help us to keep your city clean and hygienic ಬೀದಿ ದೀಪಗಳ ನಿರ್ವಹಣೆ ಬೀದಿ ದೀಪಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು.
Street light Management Street light Management has been outsourced. It includes new street connection and repair. If you have any complaints regarding Street light management please call. 08221-226101 ______________________________________________________________________________________________________________________ ನಗರ ಸ್ಥಳೀಯ ಸಂಸ್ಥೆಗಳ ಧ್ಯೇಯೋದ್ಧೇಶಗಳು ಇಂದು ನಗರ ಜೀವನ ವ್ಯವಸ್ಥೆಯು ಸಮರ್ಪಕವಾಗಿರಲು ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪುರಸಭೆಯ ಮುಖಾಂತರ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿರ್ವಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿರ್ವಹಣಾ ಕೌಶಲ್ಯಗಳು ವೃದ್ದಿಗೊಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾಯಕ್ರಮಗಳು ಸುಲಲಿತವಾಗಿ ಅನುಷ್ಠಾನಗೊಳ್ಳಬೆಕು. ಹಣಕಾಸು ನಿರ್ವಹಣೆಯಲ್ಲಿ ಮತ್ತು ಇತರೆ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳು ಕೆಳಕಂಡಂತಿವೆ: ಪಟ್ಟಣದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು. ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು. ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು. ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು. ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು. ಪಟ್ಟಣದ ನೈರ್ಮಲ್ಯ ಕಾಪಾಡುವುದು. ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು. ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ. ಕೊಳಚೆ ಪ್ರದೇಶಗಳ ಅಭಿವೃದ್ದಿ ಹಾಗೂ ಪಟ್ಟಣದ ಬಡತನ ನಿವಾರಣೆ. ರಸ್ತೆ, ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ, ಉದ್ಯಾನವನ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂಥ ಮೂಲಸೌಕರ್ಯಗಳನ್ನು ಒದಗಿಸುವುದು. ಸ್ಮಶಾಣ ಭೂಮಿ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು. ಜನನ-ಮರಣ ನೋಂದಣಿಯೂ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ-ಅಂಶಗಳನ್ನು ಒದಗಿಸುವುದು. ಕಸಾಯಿಖಾನೆಗಳ ನಿಯಂತ್ರಣ. ಸರ್ಕಾರದ ಮಂಜೂರಾತಿಗೆ ಒಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆ ಹೊಂದಿವೆ. ರಸ್ತೆ, ಬೀದಿಗಳ ದುರಸ್ಥಿ ಮತ್ತು ನಿರ್ವಹಣೆ. ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ ಸದಾ ತೊಡಗಿರುತ್ತದೆ. This Page is Maintained by :Venkata Naika, CAO Updated Date: 25-03-2013 Designed By :Poornima S G ITStaff
ನಂಜನಗೂಡು ಸ್ಥಳೀಯ ಸಂಸ್ಥೆಯ ಬಗ್ಗೆ.

